ಮಂಡ್ಯ ಜಿಲ್ಲೆ ಬಗ್ಗೆ

‘ಸಕ್ಕರೆ ಜಿಲ್ಲೆ’ ಮಂಡ್ಯ ಜಿಲ್ಲಾ ಪಂಚಾಯತ್ ಅಂತರ್ಜಾಲ ತಾಣಕ್ಕೆ ಸ್ವಾಗತ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಪ್ರಕಾರ, ಜಿಲ್ಲಾ ಪಂಚಾಯತ್ ರೂಪುಗೊಂಡಿದೆ. ಜನತೆಯ ಪಾಲ್ಗೊಳ್ಳುವಿಕೆ, ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಮೂರು ಹಂತಗಳ ಆಡಳಿತ ವ್ಯವಸ್ಥೆ, ವಿಕೇಂದ್ರೀಕೃತ ಯೋಜನೆ ರೂಪಿಸುವಿಕೆ, ಪರಿಣಾಮಕಾರಿ ಯೋಜನೆ ರೂಪಿಸುವುದಕ್ಕಾಗಿ ಆರ್ಥಿಕ ವಿಕೇಂದ್ರೀಕರಣ, ಪರಿಣಾಮಕಾರಿ ಕಾರ್ಯ ನಿರ್ವಹಣೆಗಾಗಿ ಆಡಳಿತ ವಿಕೇಂದ್ರೀಕರಣ, ಕೌಶಲ ತರಬೇತಿಗಳ ಮೂಲಕ ಜನರ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಾಮರ್ಥ್ಯ ನಿರ್ಮಾಣದ ಆಶಯಗಳನ್ನು ಇಟ್ಟುಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೆಲಸ ನಿರ್ವಹಿಸುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಸಾಮಾನ್ಯ ಜನತೆಯ ಪರವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಡ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಏಳು (07) ತಾಲ್ಲೂಕು ಪಂಚಾಯತ್ ಹಾಗೂ 233 ಗ್ರಾಮ ಪಂಚಾಯತ್ ಗಳು ಕಾರ್ಯನಿರ್ವಹಿಸುತ್ತಿವೆ.

ಮಂಡ್ಯ ಜಿಲ್ಲೆ ಬಗ್ಗೆ ಒಂದಿಷ್ಟು...

‘ಸಕ್ಕರೆ ಜಿಲ್ಲೆ’ ಎಂಬ ವಿಶೇಷಣದಿಂದ ಗುರುತಿಸಿಕೊಂಡಿರುವ ಮಂಡ್ಯ ಜಿಲ್ಲೆ ‘ಸಾಂಸ್ಕೃತಿಕ ರಾಜಧಾನಿ’ ಮೈಸೂರು (40 ಕಿ.ಮೀ.) ಹಾಗೂ ‘ಐ.ಟಿ. ರಾಜಧಾನಿ’ ಬೆಂಗಳೂರು (100 ಕಿ.ಮೀ.) ನಡುವೆ ಇದೆ. ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಪಾಂಡವಪುರ ಮತ್ತು ಕೃಷ್ಣರಾಜಪೇಟೆ ಹೆಸರಿನ ಏಳು ತಾಲ್ಲೂಕುಗಳಿದ್ದು, ಸುಮಾರು 4,961 ಚದರ ಕಿ.ಮೀ., ವ್ಯಾಪ್ತಿಯಲ್ಲಿ ಮಂಡ್ಯ ಜಿಲ್ಲೆ ಹರಡಿಕೊಂಡಿದೆ. ಹಾಸನ, ತುಮಕೂರು, ಚಾಮರಾಜನಗರ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಿಂದ ಸುತ್ತುವರಿದಿದೆ.

ಆಡಳಿತ ದೃಷ್ಟಿಯಿಂದ ಮಂಡ್ಯ ಮತ್ತು ಪಾಂಡವಪುರ ಕಂದಾಯ ಉಪ ವಿಭಾಗಗಳನ್ನು ರಚಿಸಲಾಗಿದೆ. ಮಂಡ್ಯ ಉಪ ವಿಭಾಗಕ್ಕೆ ಮಂಡ್ಯ, ಮದ್ದೂರು, ಮಳವಳ್ಳಿ ತಾಲ್ಲೂಕುಗಳು ಹಾಗೂ ಪಾಂಡವಪುರ ಉಪ ವಿಭಾಗಕ್ಕೆ ಕೃಷ್ಣರಾಜಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು ಸೇರಿವೆ.

ಪಂಚ ನದಿಗಳು:

ಕಾವೇರಿ, ಹೇಮಾವತಿ, ವೀರವೈಷ್ಣವಿ, ಶಿಂಷಾ, ಲೋಕಪಾವನಿ ‘ಪಂಚ ನದಿಗಳು’ ಜಿಲ್ಲೆಯ ಬಹುಭಾಗವನ್ನು ಹಸಿರಾಗಿಸಿವೆ. ಕೃಷ್ಣರಾಜಸಾಗರ ಜಲಾಶಯದಿಂದ ಜಿಲ್ಲೆಯ ಶೇ 28ರಷ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವಿದೆ. ಕೃಷ್ಣರಾಜಪೇಟೆ, ನಾಗಮಂಗಲ ತಾಲ್ಲೂಕಿನ ಕೆಲ ಭಾಗಕ್ಕೆ ಹೇಮಾವತಿ ನೀರು ದೊರೆಯುತ್ತದೆ. ಅಲ್ಲದೆ, ಮಳವಳ್ಳಿ, ನಾಗಮಂಗಲ ಮತ್ತು ಕೃಷ್ಣರಾಜಪೇಟೆ ತಾಲ್ಲೂಕಿನ ಬಹುಭಾಗಕ್ಕೆ ಮಳೆಯೇ ಆಧಾರ. ಬೇಸಾಯ, ಹೈನುಗಾರಿಕೆ, ತೋಟಗಾರಿಕೆ ಇಲ್ಲಿನ ಜನರ ಮುಖ್ಯ ಕಸುಬು. ಕಬ್ಬು, ಭತ್ತ ಮತ್ತು ರಾಗಿ ಮುಖ್ಯ ಬೆಳೆಗಳು. 0.24 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಮಂಡ್ಯ ಜಿಲ್ಲೆಯ ಹವಾಮಾನ ಆಹ್ಲಾದಕರವಾಗಿದೆ.

ನಾಗಮಂಗಲ ತಾಲ್ಲೂಕು ವಿಸ್ತೀರ್ಣದಲ್ಲಿ (ಜಿಲ್ಲೆಯ ಶೇ 21ರಷ್ಟು ಭಾಗ) ದೊಡ್ಡ ತಾಲ್ಲೂಕು. ಶ್ರೀರಂಗಪಟ್ಟಣ ತಾಲ್ಲೂಕು ವಿಸ್ತೀರ್ಣದಲ್ಲಿ (ಜಿಲ್ಲೆಯ ಶೇ 3ರಷ್ಟು ಭಾಗ) ಚಿಕ್ಕ ತಾಲ್ಲೂಕು. ಉಳಿದಂತೆ, 31 ಹೋಬಳಿಗಳು, 1,365 ಜನವಸತಿ ಇರುವ ಹಾಗೂ 113 ಜನವಸತಿ ಇಲ್ಲದ ಗ್ರಾಮಗಳಿವೆ. ಎಂಟು ಶೈಕ್ಷಣಿಕ ವಲಯಗಳಿವೆ.

ಮಂಡ್ಯ- ಜಿಪಂ ಕೇಂದ್ರ ಸ್ಥಾನ:

ಮಂಡ್ಯ ನಗರದಲ್ಲಿ ಜಿಲ್ಲಾ ಪಂಚಾಯತ್ ಕೇಂದ್ರ ಸ್ಥಾನ ಇದೆ. ಏಳು ತಾಲ್ಲೂಕು ಕೇಂದ್ರಗಳಲ್ಲೂ ತಾಲ್ಲೂಕು ಪಂಚಾಯತ್ ಗಳಿವೆ. ಜಿಲ್ಲೆಯಲ್ಲಿ ಒಟ್ಟು 233 ಗ್ರಾಮ ಪಂಚಾಯಿತಿಗಳಿವೆ. ಮಂಡ್ಯ ತಾಲ್ಲೂಕಿನಲ್ಲಿ 46, ಮದ್ದೂರು ತಾಲ್ಲೂಕಿನಲ್ಲಿ 42, ಮಳವಳ್ಳಿ ತಾಲ್ಲೂಕಿನಲ್ಲಿ 39, ಪಾಂಡವಪುರ ತಾಲ್ಲೂಕಿನಲ್ಲಿ 24, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 21, ನಾಗಮಂಗಲ ತಾಲ್ಲೂಕಿನಲ್ಲಿ 27 ಹಾಗೂ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ 34 ಗ್ರಾಮ ಪಂಚಾಯಿತಿಗಳಿವೆ.

ತಾಲ್ಲೂಕುಗಳ ಮಾಹಿತಿ

  • ಮಂಡ್ಯ ತಾಲ್ಲೂಕು
  • ಕೃಷ್ಣರಾಜಪೇಟೆ ತಾಲ್ಲೂಕು
  • ಮದ್ದೂರು ತಾಲ್ಲೂಕು
  • ಮಳವಳ್ಳಿ ತಾಲ್ಲೂಕು
  • ನಾಗಮಂಗಲ ತಾಲ್ಲೂಕು
  • ಪಾಂಡವಪುರ ತಾಲ್ಲೂಕು
  • ಶ್ರೀರಂಗಪಟ್ಟಣ ತಾಲ್ಲೂಕು

ಮಂಡ್ಯ ತಾಲ್ಲೂಕು

ಮಂಡ್ಯ ತಾಲ್ಲೂಕು

ಜಿಲ್ಲಾ ಪಂಚಾಯಿತಿ ಸದಸ್ಯರು 08
ತಾಲ್ಲೂಕು ಪಂಚಾಯಿತಿ ಸದಸ್ಯರು 23
ಗ್ರಾಮ ಪಂಚಾಯಿತಿ ಸದಸ್ಯರು 713
ಜಿಲ್ಲಾ ಕೇಂದ್ರದಿಂದ ಇರುವ ದೂರ 0 ಕಿಮೀ
ಹೋಬಳಿಗಳು 05
ಗ್ರಾಮ ಪಂಚಾಯಿತಿಗಳು 46
ಗ್ರಾಮಗಳು 183
ವಿಸ್ತೀರ್ಣ 713 ಚದರ ಕಿ.ಮೀ
ಒಟ್ಟು ಜನಸಂಖ್ಯೆ 4,15,153 (2011ರ ಜನಗಣತಿ)
ಗ್ರಾಮೀಣ ಜನಸಂಖ್ಯೆ 2,77,795

ಕೃಷ್ಣರಾಜಪೇಟೆ ತಾಲ್ಲೂಕು

ಕೃಷ್ಣರಾಜಪೇಟೆ ತಾಲ್ಲೂಕು

ಜಿಲ್ಲಾ ಪಂಚಾಯಿತಿ ಸದಸ್ಯರು 07
ತಾಲ್ಲೂಕು ಪಂಚಾಯಿತಿ ಸದಸ್ಯರು 19
ಗ್ರಾಮ ಪಂಚಾಯಿತಿ ಸದಸ್ಯರು 602
ಜಿಲ್ಲಾ ಕೇಂದ್ರದಿಂದ ಇರುವ ದೂರ 60 ಕಿಮೀ
ಹೋಬಳಿಗಳು 06
ಗ್ರಾಮ ಪಂಚಾಯಿತಿಗಳು 34
ಗ್ರಾಮಗಳು 316
ವಿಸ್ತೀರ್ಣ 896 ಚದರ ಕಿ.ಮೀ
ಒಟ್ಟು ಜನಸಂಖ್ಯೆ 2,60,479(2011ರ ಜನಗಣತಿ)
ಗ್ರಾಮೀಣ ಜನಸಂಖ್ಯೆ 2,34,533

ಮದ್ದೂರು ತಾಲ್ಲೂಕು

ಮದ್ದೂರು ತಾಲ್ಲೂಕು

ಜಿಲ್ಲಾ ಪಂಚಾಯಿತಿ ಸದಸ್ಯರು 08
ತಾಲ್ಲೂಕು ಪಂಚಾಯಿತಿ ಸದಸ್ಯರು 22
ಗ್ರಾಮ ಪಂಚಾಯಿತಿ ಸದಸ್ಯರು 686
ಜಿಲ್ಲಾ ಕೇಂದ್ರದಿಂದ ಇರುವ ದೂರ 18 ಕಿಮೀ
ಹೋಬಳಿಗಳು 04
ಗ್ರಾಮ ಪಂಚಾಯಿತಿಗಳು 42
ಗ್ರಾಮಗಳು 159
ವಿಸ್ತೀರ್ಣ 614 ಚದರ ಕಿ.ಮೀ
ಒಟ್ಟು ಜನಸಂಖ್ಯೆ 2,95,432(2011ರ ಜನಗಣತಿ)
ಗ್ರಾಮೀಣ ಜನಸಂಖ್ಯೆ 2,60,285

ಮಳವಳ್ಳಿ ತಾಲ್ಲೂಕು

ಮಳವಳ್ಳಿ ತಾಲ್ಲೂಕು

ಜಿಲ್ಲಾ ಪಂಚಾಯಿತಿ ಸದಸ್ಯರು 08
ತಾಲ್ಲೂಕು ಪಂಚಾಯಿತಿ ಸದಸ್ಯರು 20
ಗ್ರಾಮ ಪಂಚಾಯಿತಿ ಸದಸ್ಯರು 630
ಜಿಲ್ಲಾ ಕೇಂದ್ರದಿಂದ ಇರುವ ದೂರ 29 ಕಿಮೀ
ಹೋಬಳಿಗಳು 04
ಗ್ರಾಮ ಪಂಚಾಯಿತಿಗಳು 39
ಗ್ರಾಮಗಳು 186
ವಿಸ್ತೀರ್ಣ 809 ಚದರ ಕಿ.ಮೀ
ಒಟ್ಟು ಜನಸಂಖ್ಯೆ 2,83,265 (2011ರ ಜನಗಣತಿ)
ಗ್ರಾಮೀಣ ಜನಸಂಖ್ಯೆ 2,45,664

ನಾಗಮಂಗಲ ತಾಲ್ಲೂಕು

ನಾಗಮಂಗಲ ತಾಲ್ಲೂಕು

ಜಿಲ್ಲಾ ಪಂಚಾಯಿತಿ ಸದಸ್ಯರು 05
ತಾಲ್ಲೂಕು ಪಂಚಾಯಿತಿ ಸದಸ್ಯರು 13
ಗ್ರಾಮ ಪಂಚಾಯಿತಿ ಸದಸ್ಯರು 439
ಜಿಲ್ಲಾ ಕೇಂದ್ರದಿಂದ ಇರುವ ದೂರ 40 ಕಿಮೀ
ಹೋಬಳಿಗಳು 05
ಗ್ರಾಮ ಪಂಚಾಯಿತಿಗಳು 27
ಗ್ರಾಮಗಳು 367
ವಿಸ್ತೀರ್ಣ 1034 ಚದರ ಕಿ.ಮೀ
ಒಟ್ಟು ಜನಸಂಖ್ಯೆ 1,18,879 (2011ರ ಜನಗಣತಿ)
ಗ್ರಾಮೀಣ ಜನಸಂಖ್ಯೆ 1,70,121

ಪಾಂಡವಪುರ ತಾಲ್ಲೂಕು

ಪಾಂಡವಪುರ ತಾಲ್ಲೂಕು

ಜಿಲ್ಲಾ ಪಂಚಾಯಿತಿ ಸದಸ್ಯರು 05
ತಾಲ್ಲೂಕು ಪಂಚಾಯಿತಿ ಸದಸ್ಯರು 14
ಗ್ರಾಮ ಪಂಚಾಯಿತಿ ಸದಸ್ಯರು 421
ಜಿಲ್ಲಾ ಕೇಂದ್ರದಿಂದ ಇರುವ ದೂರ 29 ಕಿಮೀ
ಹೋಬಳಿಗಳು 03
ಗ್ರಾಮ ಪಂಚಾಯಿತಿಗಳು 24
ಗ್ರಾಮಗಳು 171
ವಿಸ್ತೀರ್ಣ 528 ಚದರ ಕಿ.ಮೀ
ಒಟ್ಟು ಜನಸಂಖ್ಯೆ 1,83,352 (2011ರ ಜನಗಣತಿ)
ಗ್ರಾಮೀಣ ಜನಸಂಖ್ಯೆ 1,16,953

ಶ್ರೀರಂಗಪಟ್ಟಣ ತಾಲ್ಲೂಕು

ಶ್ರೀರಂಗಪಟ್ಟಣ ತಾಲ್ಲೂಕು

ಜಿಲ್ಲಾ ಪಂಚಾಯಿತಿ ಸದಸ್ಯರು 05
ತಾಲ್ಲೂಕು ಪಂಚಾಯಿತಿ ಸದಸ್ಯರು 13
ಗ್ರಾಮ ಪಂಚಾಯಿತಿ ಸದಸ್ಯರು 398
ಜಿಲ್ಲಾ ಕೇಂದ್ರದಿಂದ ಇರುವ ದೂರ 28 ಕಿಮೀ
ಹೋಬಳಿಗಳು 04
ಗ್ರಾಮ ಪಂಚಾಯಿತಿಗಳು 21
ಗ್ರಾಮಗಳು 95
ವಿಸ್ತೀರ್ಣ 368 ಚದರ ಕಿ.ಮೀ
ಒಟ್ಟು ಜನಸಂಖ್ಯೆ 1,80,191 (2011ರ ಜನಗಣತಿ)
ಗ್ರಾಮೀಣ ಜನಸಂಖ್ಯೆ 1,46,056