ಆಡಳಿತಾಧಿಕಾರಿ

ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 239ರಡಿಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗಳಿಗೆ ನೇಮಿಸಲಾದ ಆಡಳಿತಾಧಿಕಾರಿಗಳು ಉಪ ಪ್ರಕರಣ 239(2)ರ ಪ್ರಕಾರ ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
1. ಅಧಿನಿಯಮದಡಿ ಅಥವಾ ಯಾವುದೇ ಇತರ ಕಾನೂನಿನ ಉಪಬಂಧಗಳನ್ನು ಕಾರ್ಯಗತಗೊಳಿಸುವಂತಹ ಹೊಣೆಯನ್ನು ಹೊತ್ತ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಅಧಿಕಾರಗಳನ್ನು ಚಲಾಯಿಸುವುದು.
2. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಸ್ಥಾಯಿ ಸಮಿತಿಗಳು ಮತ್ತು ಇತರ ಸಮಿತಿಗಳ ಅಧಿಕಾರಗಳನ್ನು ಚಲಾಯಿಸುವುದು.
3. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಈ ಅಧಿನಿಯಮದಡಿ ಅಥವಾ ಇತರೆ ಕಾನೂನಿನ ಮೂಲಕ ಪ್ರಧಾನ ಮಾಡಬೇಕಾದಂತಹ ಕರ್ತವ್ಯಗಳಿಗೆ ಸಂಬಂಧಿಸಿದಂತಹ ಅಧಿಕಾರಗಳನ್ನು ಚಲಾಯಿಸುವುದು.

ಮುಂದುವರೆದು, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಸಾಮಾನ್ಯ ಸಭೆ, ಸ್ಥಾಯಿ ಸಮಿತಿ ಸಭೆಗಳು ಮತ್ತು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಲ್ಲಾ ಕರ್ತವ್ಯಗಳನ್ನು ಆಡಳಿತಾಧಿಕಾರಿಗಳು ನಿರ್ವಹಿಸತಕ್ಕದ್ದು.

ದೀನ್ ದಯಾಳ್ ಉಪಾಧ್ಯಯ ಪಂಚಾಯತ್ ಸಶಸ್ತ್ರೀಕರಣ ಪುರಸ್ಕಾರ್-2019

ಮಹಾತ್ಮ ಗಾಂಧಿ ನರೇಗಾ ಯೋಜನೆ


ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ

ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿಗಳು

ಕ್ರ.ಸಂ. ಆರ್ಥಿಕ ವರ್ಷ ಕೃಷ್ಣರಾಜಪೇಟೆ ಮದ್ದೂರು
1 2013-14 ಅಘಾಲಯ ಸೋಮನಹಳ್ಳಿ
2 2014-15 ಅಗ್ರಹಾರಬಾಚಹಳ್ಳಿ ಯಡಗನಹಳ್ಳಿ
3 2015-16 ಅಗ್ರಹಾರಬಾಚಹಳ್ಳಿ ಅಣ್ಣೂರು
4 2016-17 ಅಗ್ರಹಾರಬಾಚಹಳ್ಳಿ ಹೆಮ್ಮನಹಳ್ಳಿ
5 2017-18 ಅಗ್ರಹಾರಬಾಚಹಳ್ಳಿ ಹೆಮ್ಮನಹಳ್ಳಿ
6 2018-19 ಅಗ್ರಹಾರಬಾಚಹಳ್ಳಿ ಅಣ್ಣೂರು
7 2019-20 ಅಕ್ಕಿಹೆಬ್ಬಾಳು ಯಡಗನಹಳ್ಳಿ