ಪ್ರಶಸ್ತಿಗಳು

ರಾಷ್ಟ್ರೀಯ ಪ್ರಶಸ್ತಿ


ರಾಷ್ಟ್ರೀಯ ಪಂಚಾಯತ್ ಪುರಸ್ಕಾರ

ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಗ್ರಾಮೀಣಾಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರತಿ ವರ್ಷ ನೀಡುವ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಮಂಡ್ಯ ಜಿಲ್ಲೆಯ ಮೂರು ಸ್ತರದ ಗ್ರಾಮ ಪಂಚಾಯತಿಗಳು ಭಾಜನರಾಗುತ್ತಾ ದೇಶದ ಗಮನ ಸೆಳೆದಿವೆ. ಪ್ರಶಸ್ತಿಗಳು ಮಂಡ್ಯ ಜಿಲ್ಲೆಗೆ ಹೆಮ್ಮೆ ತಂದಿದ್ದು ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸಿದಂತಾಗಿದೆ.


ಶ್ರೀ ಎಸ್.ಎಂ.ಜುಲ್ ಫಿಖಾರ್ ಉಲ್ಲಾ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಮೂರು ರಾಷ್ಟ್ರೀಯ ಪುರಸ್ಕಾರಗಳು ಮಂಡ್ಯ ಜಿಲ್ಲೆಗೆ ಸಂದಿದ್ದು, ಮತ್ತೊಂದು ದಾಖಲೆ ಎನ್ನಬಹುದು. 2021 (Appraisal Year 2019-20) ಸಾಲಿನಲ್ಲಿ ಮಂಡ್ಯ ಜಿಲ್ಲೆಗೆ ಈ ಕೆಳಕಂಡ ಪುರಸ್ಕಾರಗಳು ಸಂದಿವೆ.
1. ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ – ಪಾಂಡವಪುರ ತಾಲ್ಲೂಕು ಪಂಚಾಯತ್ (ತಾಲ್ಲೂಕು ಪಂಚಾಯತ್ ವಿಭಾಗ)
2. ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ – ಯಡಗನಹಳ್ಳಿ ಗ್ರಾಮ ಪಂಚಾಯತ್, ಮದ್ದೂರು ತಾಲ್ಲೂಕು (ಗ್ರಾಮ ಪಂಚಾಯತ್ ವಿಭಾಗ)
3. ನಾನಾಜೀ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ – ಹೆಮ್ಮನಹಳ್ಳಿ ಗ್ರಾಮ ಪಂಚಾಯತ್, ಮದ್ದೂರು ತಾಲ್ಲೂಕು


ಶ್ರೀ ಕೆ.ಯಾಲಕ್ಕಿಗೌಡ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ನಾಲ್ಕು ರಾಷ್ಟ್ರೀಯ ಪುರಸ್ಕಾರಗಳು ಮಂಡ್ಯ ಜಿಲ್ಲೆಗೆ ಸಂದಿರುವುದು ದಾಖಲೆ ಎನ್ನಬಹುದು. 2020 (Appraisal Year 2018-19) ಸಾಲಿನಲ್ಲಿ ಮಂಡ್ಯ ಜಿಲ್ಲೆಗೆ ಈ ಕೆಳಕಂಡ ಪುರಸ್ಕಾರಗಳು ಸಂದಿವೆ.
1. ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ – ಮಂಡ್ಯ ಜಿಲ್ಲಾ ಪಂಚಾಯತ್ (ಜಿಲ್ಲಾ ಪಂಚಾಯತ್ ವಿಭಾಗ)
2. ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ – ಅಣ್ಣೂರು ಗ್ರಾಮ ಪಂಚಾಯತ್, ಮದ್ದೂರು ತಾಲ್ಲೂಕು (ಗ್ರಾಮ ಪಂಚಾಯತ್ ವಿಭಾಗ)
3. ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪುರಸ್ಕಾರ – ಹೆಮ್ಮನಹಳ್ಳಿ ಗ್ರಾಮ ಪಂಚಾಯತ್, ಮದ್ದೂರು ತಾಲ್ಲೂಕು
4. ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (GPDP) – ನಗುವನಹಳ್ಳಿ ಗ್ರಾಮ ಪಂಚಾಯತ್, ಶ್ರೀರಂಗಪಟ್ಟಣ ತಾಲ್ಲೂಕು


ದೀನ್ ದಯಾಳ್ ಉಪಾಧ್ಯಯ ಪಂಚಾಯತ್ ಸಶಸ್ತ್ರೀಕರಣ ಪುರಸ್ಕಾರ್-2019

"ದೀನ್ ದಯಾಳ್ ಉಪಾಧ್ಯಯ ಪಂಚಾಯತ್ ಸಶಸ್ತ್ರೀಕರಣ ಪುರಸ್ಕಾರ್-2019" (ಸಾಮಾನ್ಯ) ರಾಷ್ಟ್ರ ಪುರಸ್ಕಾರಕ್ಕೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಭಾಜನವಾಗಿರುತ್ತದೆ. 2019 ಫೆಬ್ರುವರಿಯಲ್ಲಿ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. 32 ಅಂಶಗಳ ಮಾನದಂಡದ ಆಧಾರದ ಮೇಲೆ ಆಡಳಿತ ಮತ್ತು ಅಭಿವೃದ್ಧಿ ವಿಷಯಗಳನ್ನು ಆಧಾರಿಸಿ ಉತ್ತಮ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಸದರಿ ಪುರಸ್ಕಾರವನ್ನು ನೀಡಲಾಗಿರುತ್ತದೆ. ನವದೆಹಲಿಯಲ್ಲಿ ದಿನಾಂಕ:23/10/2019ರಂದು ನಡೆದ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ್ 2019ರ ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳ ಬಸವರಾಜು ಮತ್ತು ಸಹಾಯಕ ನಿರ್ದೇಶಕರಾದ (ಗ್ರಾ.ಉ). ಶ್ರೀ ಶಿವಕುಮಾರ್.ಬಿ.ಎಸ್ ಪ್ರಶಸ್ತಿ ಸ್ವೀಕರಿಸಿದರು. ಶ್ರೀ ಕೆ.ಯಾಲಕ್ಕಿಗೌಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಮಂಡ್ಯರವರಿಗೆಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ನಾಗವೇಣಿ ರವರು ಪುರಸ್ಕಾರವನ್ನು ಹಸ್ತಾಂತರಿಸಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆ

ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನೀಡಿದ ರಾಷ್ಟ್ರೀಯ ವಾರ್ಷಿಕ ಪುರಸ್ಕಾರ ಮಂಡ್ಯ ಜಿಲ್ಲಾ ಪಂಚಾಯತ್ ಗೆ ಲಭಿಸಿತು. ನವದೆಹಲಿಯ ಕೃಷಿ ಭವನದಲ್ಲಿ ದಿನಾಂಕ: 31-08-2018ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶರತ್, ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ|| ಎಂ.ಕೃಷ್ಣರಾಜು ಅವರು ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯ ಪ್ರಶಸ್ತಿ


ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಬೆಂಗಳೂರಿನಲ್ಲಿ ದಿನಾಂಕ: 02-11-2017ರಂದು ಮಂಡ್ಯ ಜಿಲ್ಲೆಯನ್ನು (ಗ್ರಾಮೀಣ ಪ್ರದೇಶ) ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಿತು. 2012-13ನೇ ಸಾಲಿಮ ಬೇಸ್ ಲೈನ್ ಸಮೀಕ್ಷೆಯಲ್ಲಿ ಗುರುತಿಸಿದ್ದ ಶೌಚಾಲಯ ರಹಿತ ಕುಟುಂಬಗಳು ಸೇರಿದಂತೆ ಜಿಲ್ಲೆಯಲ್ಲಿನ (ಗ್ರಾಮೀಣ) ಎಲ್ಲಾ 234 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೌಚಾಲಯ ರಹಿತ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎನ್ನುವ ಅಭಿದಾನದಕ್ಕೆ ಭಾಜನವಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಜೆ. ಪಾಟೀಲ್ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಕೃಷ್ಣಪ್ಪ ಅವರೊಂದಿಗೆ ಜಿಲ್ಲಾ ಪಂಚಾಯತ್ ಸಿಇಓ ಬಿ.ಶರತ್, ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ|| ಎಂ.ಕೃಷ್ಣರಾಜು ಮತ್ತು ಯೋಜನಾ ನಿರ್ದೇಶಕರಾದ ಗಣಪತಿ ಸಿ.ನಾಯಕ್ ಇದ್ದಾರೆ.

ಗಾಂಧಿ ಗ್ರಾಮ ಪ್ರಶಸ್ತಿ

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರತಿ ವರ್ಷ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನದಂದು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯತ್ ಗಳನ್ನು ಗುರುತಿಸಿ ಗಾಂಧಿ ಗ್ರಾಮ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಪ್ರೋತ್ಸಾಹಿಸುತ್ತಾ ಬಂದಿದೆ. ಗ್ರಾಮ ಪಂಚಾಯಿತಿಗಳಿಗೆ ವಿವಿಧ ಅಂಶಗಳ ಕುರಿತಂತೆ ಒಟ್ಟು 80 ಪ್ರಶ್ನೆಗಳನ್ನು ಹಣಕಾಸಿನ ನಿರ್ವಹಣೆ/ ವಿನೂತನ ಪ್ರಯೋಗಗಳು, ಜಮಾಬಂಧಿ, ಯೋಜನೆಗಳ ಅನುಷ್ಠಾನ, ಮೂಲ ಸೌಕರ್ಯ, ನೈರ್ಮಲ್ಯೀಕರಣ ಸೇರಿದಂತೆ ವಿವಿಧ ಪ್ರಶ್ನೆಗಳನ್ನು 150 ಅಂಕಗಳಿಗೆ ಕೇಳಲಾಗುತ್ತದೆ. ಗರಿಷ್ಠ ಅಂಕಗಳಿಸಿದ ಗ್ರಾಮ ಪಂಚಾಯಿತಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಮಂಡ್ಯ ಜಿಲ್ಲೆಯಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಗ್ರಾಮ ಪಂಚಾಯಿತಿಗಳ ವಿವರ ಈ ಕೆಳಕಂಡಂತಿದೆ.

ಕ್ರ.ಸಂ. ಆರ್ಥಿಕ ವರ್ಷ ಕೃಷ್ಣರಾಜಪೇಟೆ ಮದ್ದೂರು ಮಳವಳ್ಳಿ ಮಂಡ್ಯ ನಾಗಮಂಗಲ ಪಾಂಡವಪುರ ಶ್ರೀರಂಗಪಟ್ಟಣ
1 2013-14 ಅಘಾಲಯ ಸೋಮನಹಳ್ಳಿ ರಾಗಿಬೊಮ್ಮನಹಳ್ಳಿ ಕೊತ್ತತ್ತಿ -- ಚಿನಕುರಳಿ ಹೊಸಹಳ್ಳಿ
2 2014-15 ಅಗ್ರಹಾರಬಾಚಹಳ್ಳಿ ಯಡಗನಹಳ್ಳಿ ರಾಗಿಬೊಮ್ಮನಹಳ್ಳಿ ಕೆರೆಗೋಡು ಬೆಳ್ಳೂರು ಕಟ್ಟೇರಿ ಬೆಳಗೊಳ
3 2015-16 ಅಗ್ರಹಾರಬಾಚಹಳ್ಳಿ ಅಣ್ಣೂರು ಪಂಡಿತಹಳ್ಳಿ ಬಿ.ಗೌಡಗೆರೆ ಬಿಂಡಿಗನವಿಲೆ ಸುಂಕಾತೊಣ್ಣುರು ಕೆ.ಶೆಟ್ಟಹಳ್ಳಿ
4 2016-17 ಅಗ್ರಹಾರಬಾಚಹಳ್ಳಿ ಹೆಮ್ಮನಹಳ್ಳಿ ಬಂಡೂರು ಗೋಪಾಲಪುರ ಬಚೀಣ್ಯಾ ಸುಂಕಾತೊಣ್ಣುರು ನಗುವನಹಳ್ಳಿ
5 2017-18 ಅಗ್ರಹಾರಬಾಚಹಳ್ಳಿ ಹೆಮ್ಮನಹಳ್ಳಿ ಬಂಡೂರು ಮುತ್ತೇಗೆರೆ ಹೊನ್ನಾವರ ಮೇಲುಕೋಟೆ ಕೃಷ್ಣರಾಜಸಾಗರ
6 2018-19 ಅಗ್ರಹಾರಬಾಚಹಳ್ಳಿ ಅಣ್ಣೂರು ಹಲಗೂರು ಸಾತನೂರು ಕಾಂತಪುರ ಮೇಲುಕೋಟೆ ಬೆಳಗೊಳ
7 2019-20 ಅಕ್ಕಿಹೆಬ್ಬಾಳು ಯಡಗನಹಳ್ಳಿ ಲಿಂಗಪಟ್ಟಣ ಕೀಲಾರ ದೇವಲಾಪುರ ಚಿನಕುರಳಿ ತಡಗವಾಡಿ