ಸಭೆಗಳು

 • ಸಾಮಾನ್ಯ ಮತ್ತು ವಿಶೇಷ ಸಭೆ
 • ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಸಭೆ
 • ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ

ಸಾಮಾನ್ಯ ಮತ್ತು ವಿಶೇಷ ಸಭೆ

ಜಿಲ್ಲಾ ಪಂಚಾಯಿತಿಯ ಸಭೆಗಳು ಮತ್ತು ವಿನಿಮಯಗಳು:

ಜಿಲ್ಲಾ ಪಂಚಾಯಿತಿಯ ಸಭೆಗಳನ್ನು ನಡೆಸುವ ಬಗ್ಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993ರ ಪ್ರಕರಣ 180 ಮತ್ತು 181ರಲ್ಲಿ ವಿವರಿಸಲಾಗಿದೆ.

 • 1) ಜಿಲ್ಲಾ ಪಂಚಾಯತ್ ಸದಸ್ಯರು

  ಪಂಚಾಯತ್ ರಾಜ್ ಕಾಯಿದೆ 1993ರ ಪ್ರಕರಣ 159ರ ಅಡಿಯಲ್ಲಿ ತಿಳಿಸಿರುವಂತೆ ಈ ಕೆಳಕಂಡವರು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿರುತ್ತಾರೆ.
  • ಎ) ಪ್ರಕರಣ 160ರ ಅಡಿಯಲ್ಲಿ ಚುನಾಯಿತರಾದ ಜಿಲ್ಲಾ ಪಂಚಾಯತ್ ಸದಸ್ಯರು
  • ಬಿ) ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಕ್ಷೇತ್ರವನ್ನು ಹೊಂದಿರುವ ಲೋಕಸಭಾ ಮತ್ತು ರಾಜ್ಯ ವಿಧಾನ ಸಭಾ ಸದಸ್ಯರು.
  • ಸಿ) ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರೆಂದು ನೊಂದಾಯಿತರಾಗಿರುವ ರಾಜ್ಯ ಸಭೆಯ ಮತ್ತು ರಾಜ್ಯ ವಿಧಾನ ಪರಿಷತ್ತಿನ ಸದಸ್ಯರು.
  • ಡಿ) ಜಿಲ್ಲೆಯ ತಾಲ್ಲೂಕು ಪಂಚಾಯತ್ಗಳ ಅಧ್ಯಕ್ಷರುಗಳು
 • 2) ಜಿಲ್ಲಾ ಪಂಚಾಯಿತಿಯ ಸಭೆಗಳನ್ನು 2 ವಿಧವಾಗಿ ವಿಂಗಡಿಸಬಹುದು
  • ಎ) ಸಾಮಾನ್ಯ ಸಭೆ
  • ಬಿ) ವಿಶೇಷ ಸಭೆ
 • 3) ಸಾಮಾನ್ಯ ಸಭೆ:

  ಸಾಮಾನ್ಯ ಸಭೆಯನ್ನು ಕನಿಷ್ಟ 2 ತಿಂಗಳಿಗೊಮ್ಮೆ ನಡೆಸಬೇಕು. ಸಾಮಾನ್ಯ ಸಭೆಗೆ 10 ಪೂರ್ಣ ದಿವಸಗಳ ಮುಂಚಿತವಾಗಿ ನೋಟೀಸನ್ನು ಹೊರಡಿಸಬೇಕು.
 • 4) ವಿಶೇಷ ಸಭೆ:

  ವಿಶೇಷ ಸಭೆಗೆ ಏಳು ಪೂರ್ಣ ದಿವಸಗಳ ಮುಂಚಿತವಾಗಿ ನೋಟೀಸನ್ನು ಹೊರಡಿಸಬೇಕು. ಪಂಚಾಯತ್ ರಾಜ್ ಕಾಯ್ದಿಯ ಪ್ರಕರಣ 180(2)(ಎ) ಅಡಿಯಲ್ಲಿ ತಿಳಿಸಿರುವಂತಹ ವಿಶೇಷ ಸಂದರ್ಭಗಳಲ್ಲಿ ನಿರ್ದಿಷ್ಟಪಡಿಸಿದಂತಹ ವಿಷಯ ಕುರಿತು ವಿಶೇಷ ಸಭೆಯನ್ನು ಕರೆಯುವುದು.
 • 5) ವಿಶೇಷ ಸಭೆ ಕರೆಯುವ ಸಂದರ್ಭ

  • 5.1. ಅಧ್ಯಕ್ಷರು ಸೂಕ್ತವೆಂದು ಯೋಚಿಸಿದಾಗ ವಿಶೇಷ ಸಭೆಯನ್ನು ಕರೆಯಬಹುದು. ಅಥವಾ ಸದಸ್ಯರ ಒಟ್ಟು ಸಂಖ್ಯೆಯ ಮೂರನೇಯ ಭಾಗಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರು ಬರಹದಲ್ಲಿನ ಕೋರಿಕೆಯ ಮೇರೆಗೆ ಮತ್ತು ಅಂತಹ ಕೋರಿಕೆಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿವಸದೊಳಗಾಗಿ ವಿಶೇಷ ಸಭೆಯನ್ನು ಕರೆಯತಕ್ಕದ್ದು.
  • 5.2. ಮೂರನೇ ಒಂದು ಭಾಗದ ಸದಸ್ಯರು ಕೋರಿಕೆ ಸಲ್ಲಿಸಿದ ಹದಿನೈದು ದಿನದೊಳಗಾಗಿ ವಿಶೇಷ ಸಭೆಯನ್ನು ಕರೆಯಲು ಅಧ್ಯಕ್ಷರು ತಪ್ಪಿದರೆ ಉಪಾಧ್ಯಕ್ಷರು ವಿಶೇಷ ಸಭೆಯನ್ನು ಕರೆಯಬಹದು.
 • 6) ಕೋರಂ:

  ಜಿಲ್ಲಾ ಪಂಚಾಯಿತಿಯ ಒಟ್ಟು ಸದಸ್ಯರ ಸಂಖ್ಯೆಯ ಅರ್ಧದಷ್ಟು ಸದಸ್ಯರ ಸಂಖ್ಯೆ ಕೋರಂ ಆಗಿರತಕ್ಕದ್ದು. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಕೋರಂ ಇಲ್ಲದಿದ್ದ ಪಕ್ಷದಲ್ಲಿ ಸಭೆಯ ಅಧ್ಯಕ್ಷರು 30 ನಿಮಿಷಗಳ ಕಾಲ ಕಾಯತಕ್ಕದ್ದು. ಮತ್ತು ಅಂತಹ ಅವಧಿಯೊಳಗೆ ಕೋರಂ ಇಲ್ಲದಿದ್ದರೆ ಅಧ್ಯಕ್ಷತೆಯನ್ನು ವಹಿಸುವ ವ್ಯಕ್ತಿಯು ತಾನು ಗೊತ್ತುಪಡಿಸಬಹುದಾದ ಮುಂದಿನ ಇನ್ನೊಂದು ದಿನಾಂಕಕ್ಕೆ ಸಭೆಯನ್ನು ಮುಂದೂಡಬಹುದು.
 • 7) ಸಭೆಯ ಅಧ್ಯಕ್ಷತೆ: :

  ಪ್ರತಿಯೊಂದು ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಹಿಸಬೇಕು. ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ವಹಿಸಬೇಕು. ಅವರ ಅನುಪಸ್ಥಿತಿಯಲ್ಲಿ ಹಾಜರಿರುವ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದು. .
 • 8) ನಿರ್ಣಯ ಅಂಗೀಕಾರ: :

  ಪ್ರತಿಯೊಂದು ವಿಷಯವನ್ನು ಹಾಜರಿರುವ ಮತ್ತು ಮತ ನೀಡುವ ಸದಸ್ಯರ ಬಹಮತದ ಮೂಲಕ ತೀರ್ಮಾನಿಸಬೇಕು. ಒಂದು ವೇಳೆ ಸಮಾನ ಮತಗಳು ಬಂದ ಸಂದರ್ಭದಲ್ಲಿ ಅಧ್ಯಕ್ಷರಿಗೆ ನಿರ್ಣಾಯಕ ಮತ ನೀಡಲು ಅಧಿಕಾರವಿರುತ್ತದೆ. .
 • 9) ವಿಷಯದಲ್ಲಿ ಸದಸ್ಯರ ಹಣಕಾಸಿನ ಹಿತಾಸಕ್ತಿ: :

  ಜಿಲ್ಲಾ ಪಂಚಾಯಿತಿಯಲ್ಲಿ ಪರ್ಯಾಲೋಚನೆಗೆ ಬರುವ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಯಾವುದೇ ಹಣಕಾಸಿನ ರೂಪದ ಹಿತಾಸಕ್ತಿಯನ್ನು ಜಿಲ್ಲಾ ಪಂಚಾಯಿತಿಯ ಸದಸ್ಯನು ಹೊಂದಿರಬಾರದು. ಒಂದು ವೇಳೆ ಅಂತಹ ಹಿತಾಸಕ್ತಿಯನ್ನು ಹೊಂದಿದ್ದರೆ ಅದನ್ನು ಜಿಲ್ಲಾ ಪಂಚಾಯಿತಿಗೆ ತಿಳಿಸುವುದು ಸಂಬಂಧಿಸಿದಂತಹ ಸದಸ್ಯನ ಕರ್ತವ್ಯವಾಗಿರುತ್ತದೆ. ಇದೇ ಪ್ರಕಾರ ಅಧ್ಯಕ್ಷತೆ ವಹಿಸುವಂತಹ ವ್ಯಕ್ತಿಯೂ ಕೂಡಾ ಯಾವುದೇ ವಿಚಾರದಲ್ಲಿ ಹಣಕಾಸಿನ ಹಿತಾಸಕ್ತಿಯನ್ನು ಹೊಂದಿರಬಾರದು. .
 • 10) ವಿಷಯಸೂಚಿ: :

  ಸಭೆಯನ್ನು ಕರೆಯುವ ನೋಟೀಸಿನಲ್ಲಿ ನಮೂದಿಸಿರುವಂತಹ ವಿಷಯಗಳನ್ನು ಹೊರತುಪಡಿಸಿ ಇತರೆ ವಿಚಾರಗಳನ್ನು ಸಂಬಂಧಿಸಿದ ಸಭೆಗಳಲ್ಲಿ ಚರ್ಚಿಸತಕ್ಕದ್ದಲ್ಲ. ಯಾವುದಾದರೂ ಪ್ರಮುಖವಾದತಂಹ ಇತರ ವಿಷಯವನ್ನು ಚರ್ಚೆಗೆ ಅನುಮತಿ ನೀಡಲು ಅಧ್ಯಕ್ಷರು ಅಧಿಕಾರ ಹೊಂದಿರುತ್ತಾರೆ. ಆದರೆ, ಇದಕ್ಕೆ ಯಾವುದೇ ಒಬ್ಬ ಸದಸ್ಯನೂ ಕೂಡಾ ಆಕ್ಷೇಪವನ್ನು ವ್ಯಕ್ತಪಡಿಸಬಾರದು. .
 • 11) ತೀರ್ಮಾನದ ತಿದ್ದುಪಡಿ: :

  ಯಾವುದೇ ನಿರ್ಣಯವನ್ನು ಅಂಗಿಕರಿಸಿದ 6 ತಿಂಗಳೊಳಗೆ ಮಾರ್ಪಾಟು ಅಥವಾ ಪದ್ದತಿಯನ್ನು ಮಾಡಬೇಕಾದರೆ, ಸಾಮಾನ್ಯ ಅಥವಾ ವಿಶೇಷ ಸಭೆಯಲ್ಲಿನ ಸದಸ್ಯರ ಒಟ್ಟು ಸಂಖ್ಯೆಯ ಅರ್ಧಕ್ಕೆ ಕಡಿಮೆ ಇಲ್ಲದಷ್ಟು ಸದಸ್ಯರು ಅಂಗೀಕರಿಸಿದಂತಹ ನಿರ್ಣಯದ ಮುಖಾಂತರ ಮಾತ್ರ ಅವಕಾಶವಿರುತ್ತದೆ. .
 • 12) ಸಭೆಯ ಮುಂದೂಡುವಿಕೆ:

  ಅಧ್ಯಕ್ಷರು ಸಭೆಯಲ್ಲಿ ಹಾಜರಿರುವ ಬಹುಮತ ಸಂಖ್ಯೆಯ ಸದಸ್ಯರ ಸಮ್ಮತಿಯೊಂದಿಗೆ ಸಭೆಯನ್ನು ಮುಂದೂಡಬಹುದು. ಅಂತಹ ಮುಂದೂಡಿದಂತಹ ಸಭೆಗಳಲ್ಲಿ ಹಾಲಿ ಬಾಕಿ ಇರುವಂತಹ ಕಾರ್ಯಕಲಾಪಗಳನ್ನು ವಿಲೆ ಮಾಡಿದ ನಂತರ ಮಾತ್ರ ಹೊಸ ವಿಷಯಗಳನ್ನು ತೆಗೆದುಕೊಳ್ಳಬಹುದು. .
 • ನಡವಳಿ:

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಸಭೆ

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು

Karnataka Development Programme


ಕರ್ನಾಟಕ ಸರ್ಕಾರವು ಗ್ರಾಮೀಣ ಜನರ ಜೀವನ ಪರಿಸ್ಥಿತಿ ಸುಧಾರಣೆ, ಆರ್ಥಿಕ ಮಟ್ಟ ಹೆಚ್ಚಳ ಹಾಗೂ ರಾಜಕೀಯ ಜಾಗೃತಿಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಾ ಬಂದಿದೆ.


ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಕೃಷಿ ಮತ್ತು ಇತರ ಆರ್ಥಿಕತೆಯ ಉತ್ಪಾದಕತೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವಂತಹ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಅವಧಿಯಲ್ಲಿಯೂ ಹಾಗೂ ಮಾನ್ಯ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಈ ಎರಡೂ ಸಭೆಗಳು ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಳ್ಳುತ್ತವೆ.


ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗುವ ಸಭೆಗೆ ಜಿಲ್ಲೆಯನ್ನು ಪ್ರತಿನಿಧಿಸುವ ಎಲ್ಲಾ ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್ತು) ಪಾಲ್ಗೊಳ್ಳುತ್ತಾರೆ. ಹಾಗೇ, ಮಾನ್ಯ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ಜರುಗುವ ಸಭೆಗೆ ಜಿಲ್ಲಾ ಪಂಚಾಯಿತಿಯ ಐದು ಸ್ಥಾಯಿ ಸಮಿತಿಗಳ ಅಧ್ಯಕ್ಷರು ಪಾಲ್ಗೊಳ್ಳುತ್ತಾರೆ. ಉಳಿದಂತೆ, ಈ ಎರಡೂ ಸಭೆಗಳಿಗೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ.


ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಅಧ್ಯಕ್ಷರ ಗೈರು ಹಾಜರಿಯಲ್ಲಿ ಉಪಾಧ್ಯಕ್ಷರು, ಜಿಲ್ಲಾ ಪಂಚಾಯಿತಿ ಇವರ ಅಧ್ಯಕ್ಷತೆಯಲ್ಲಿ ಸಭೆ ಸೇರಲಾಗುತ್ತದೆ. ಈ ಇಬ್ಬರ ಗೈರುಹಾಜರಿಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ.


ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು (20 ಅಂಶ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ರಚಿಸಲಾಗಿರುವ ಜಿಲ್ಲಾ ಮಟ್ಟದ ಮಾಸಿಕ ಪರಿಶೀಲನಾ ಸಮಿತಿ

ಕ್ರ.ಸಂ. ಸಮಿತಿ ಸದಸ್ಯರು ಪದನಾಮ
1 ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು
2 ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು
3 ಜಿಲ್ಲಾ ಪಂಚಾಯಿತಿಯ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸದಸ್ಯರು
4 ಜಿಲ್ಲಾಧಿಕಾರಿ ಸದಸ್ಯರು
5 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಸದಸ್ಯರು
6 ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಸದಸ್ಯ ಕಾರ್ಯದರ್ಶಿ
7 ಎಲ್ಲಾ ಸಂಬಂಧಪಟ್ಟ ಸಹಕಾರಿ ಸಂಸ್ಥೆಗಳ, ಸಾರ್ವಜನಿಕ ವಲಯ, ಉದ್ಯಮಗಳ ಮತ್ತು ಶಾಸನಬದ್ಧ ನಿಕಾಯಗಳ ಜಿಲ್ಲಾ ಮಟ್ಟದ ಮುಖ್ಯಸ್ಥರು ಆಹ್ವಾನಿತರು
8 ಲೀಡ್ ಬ್ಯಾಂಕ್ ಅಧಿಕಾರಿ ಆಹ್ವಾನಿತರು


ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು (20 ಅಂಶ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ರಚಿಸಲಾಗಿರುವ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ

ಕ್ರ.ಸಂ. ಸಮಿತಿ ಸದಸ್ಯರು ಪದನಾಮ
1 ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರು
2 ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು
3 ಜಿಲ್ಲೆಯನ್ನು; ಜಿಲ್ಲೆಯ ಭಾಗಗಳನ್ನು ಪ್ರತಿನಿಧಿಸುವ; ಜಿಲ್ಲೆಯಲ್ಲಿ ವಾಸವಾಗಿರುವ ಸಂಸತ್ ಸದಸ್ಯರುಗಳು (ರಾಜ್ಯಸಭೆ ಮತ್ತು ಲೋಕಸಭೆ) ಸದಸ್ಯರು
4 ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು
5 ಜಿಲ್ಲೆಯಲ್ಲಿನ ತಾಲ್ಲೂಕುಗಳನ್ನು; ತಾಲ್ಲೂಕಿನ ಭಾಗಗಳನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಸದಸ್ಯರು
6 ಜಿಲ್ಲೆಯಲ್ಲಿ ವಾಸವಾಗಿರುವ; ಜಿಲ್ಲೆಯನ್ನು; ಜಿಲ್ಲೆಯ ಭಾಗಗಳನ್ನು ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯರು ಸದಸ್ಯರು
7 ಜಿಲ್ಲಾ ಪಂಚಾಯಿತಿಯ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸದಸ್ಯರು
8 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸದಸ್ಯರು
9 ಹಿಂದುಳಿದ ವರ್ಗದ ಕೋಮಿನ ಒಬ್ಬ ಪ್ರತಿನಿಧಿ ಸದಸ್ಯರು
10 ಧಾರ್ಮಿಕ ಅಲ್ಪಸಂಖ್ಯಾತ ಕೋಮಿನ ಒಬ್ಬ ಪ್ರತಿನಿಧಿ ಸದಸ್ಯರು
11 ಸಾಮಾನ್ಯ ವರ್ಗಕ್ಕೆ ಸೇರಿದ ಸಮಾಜ ಸೇವಾಕರ್ತರ ಒಬ್ಬ ಪ್ರತಿನಿಧಿ ಸದಸ್ಯರು
12 ಒಬ್ಬ ಮಹಿಳಾ ಪ್ರತಿನಿಧಿ ಸದಸ್ಯರು
13 ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪ್ರತಿನಿಧಿ
(ಪ್ರತಿನಿಧಿಯನ್ನು ಬ್ಯಾಂಕ್ ನಾಮ ನಿರ್ದೇಶನ ಮಾಡುವುದು)
ಸದಸ್ಯರು
14 ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಸದಸ್ಯರು
15 ಜಿಲ್ಲಾಧಿಕಾರಿ ಸದಸ್ಯರು
16 ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು ಸದಸ್ಯರು
17 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಸದಸ್ಯ ಕಾರ್ಯದರ್ಶಿ
18 ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಮುಖ್ಯಸ್ಥರು ಆಹ್ವಾನಿತರು
19 ಎಲ್ಲಾ ಸಂಬಂಧಪಟ್ಟ ಸಹಕಾರಿ ಸಂಸ್ಥೆಗಳ, ಸಾರ್ವಜನಿಕ ವಲಯ, ಉದ್ಯಮಗಳ ಮತ್ತು ಶಾಸನಬದ್ಧ ನಿಕಾಯಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಆಹ್ವಾನಿತರು
20 ಲೀಡ್ ಬ್ಯಾಂಕ್ ಅಧಿಕಾರಿ ಆಹ್ವಾನಿತರು


ನಡವಳಿಗಳು:

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ

(District Development Co-ordination and Monitoring Committee – DISHA)


ಲೋಕಸಭಾ ಸದಸ್ಯರು, ಮಂಡ್ಯ ಲೋಕಸಭಾ ಕ್ಷೇತ್ರ ಇವರು ಮಂಡ್ಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA) ಅಧ್ಯಕ್ಷರಾಗಿರುತ್ತಾರೆ. ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ನಡೆಸಲಾಗುವ ಸಭೆಯಲ್ಲಿ ಕೇಂದ್ರ ವಲಯ ಮತ್ತು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಾಗುತ್ತದೆ.


ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ, ಸಮಾಜ ಕಲ್ಯಾಣ ಹಾಗೂ ಇತರೆ ಜನಸ್ನೇಹಿ ಕಾರ್ಯಕ್ರಮಗಳು ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತೆ ಅನುಷ್ಟಾನಗೊಳಿಸಲು ‘ದಿಶಾ’ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ವತಿಯಿಂದ ಸ್ಥಾಪಿಸಲಾಗಿದೆ. ಈ ಸಮಿತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುಷ್ಟಾನಗೊಳಿಸಲಾಗುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ.

ರಾಜ್ಯಸಭಾ ಮಾನ್ಯ ಸದಸ್ಯರು, ಮಾನ್ಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಕೇಂದ್ರ ವಲಯ ಮತ್ತು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳನ್ನು ಅನುಷ್ಟಾನದ ಹೊಣೆ ಹೊತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.


ಭಾರತ ಸರ್ಕಾರದ ಮುಂಚೂಣಿ ಕಾರ್ಯಕ್ರಮಗಳಾದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿ.ಎಂ.ಜಿ.ಎಸ್.ವೈ); ತ್ವರಿತ ಗ್ರಾಮೀಣ ನೀರು ಸರಬರಾಜು ಯೋಜನೆ (ಆರ್.ಡಬ್ಲ್ಯೂ.ಎಸ್); ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆ (ಪಿ.ಎಂ.ಕೆ.ಎಸ್.ವೈ); ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ (ಪಿ.ಎಂ.ಎಫ್.ಬಿ.ವೈ); ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (ಎನ್.ಎಸ್.ಎ.ಪಿ); ಲೋಕಸಭಾ ಸದಸ್ಯರ ಎಂ.ಪಿ.ಲ್ಯಾಡ್ (ಎಂ.ಪಿ. ಲ್ಯಾಡ್); ಭೂ ದಾಖಲೆಗಳ ಗಣಕೀಕರಣ (ಎನ್.ಎಲ್.ಆರ್.ಎಂ.ಪಿ); ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ); ದೀನ್ ದಯಾಳ್ ಗ್ರಾಮೀಣ ಜ್ಯೋತಿ ಯೋಜನೆ (ಡಿ.ಡಿ.ಯು.ಜಿ.ಜೆ.ವೈ); ಕಾರ್ಮಿಕ ಇಲಾಖೆ; ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್.ಎಚ್.ಎಂ.); ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ); ಸಂಜೀವಿನಿ (ಎನ್.ಆರ್.ಎಲ್.ಎಂ.); ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಒಟ್ಟು 35 ಯೋಜನೆ/ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ.