ಓಂಬುಡ್ಸ್ ಮನ್

ಓಂಬುಡ್ಸ್ ಮನ್:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ -2005ರ ಪ್ರಕರಣ 27ರ ಉಪ ಪ್ರಕರಣ 1ರಲ್ಲಿ ಪದದತ್ತವಾದ ಅಧಿಕಾರ ಚಲಾಯಿಸಿ ಭಾರತ ಸರ್ಕಾರ ಈ ಅಧಿನಿಯಮದಡಿ ಸ್ವೀಕೃತವಾಗುವ ದೂರುಗಳನ್ನು ವಿಲೇಗೊಳಿಸಲು ಓಂಬುಡ್ಸ್ ಮನ್ ಗಳನ್ನು ನಿಯಮಾನುಸಾರ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಕರ್ನಾಟಕ ರಾಜ್ಯದಲ್ಲಿ ಓಂಬುಡ್ಸ್ ಮನ್ ಗಳ ನೇಮಕಾತಿಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಿರುತ್ತದೆ.


ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತತ್ವಗಳಿಗೆ ಅನುಗುಣವಾಗಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಅನುಷ್ಟಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳ ತ್ವರಿತ ನಿವಾರಣೆಗಾಗಿ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಓಂಬುಡ್ಸ್ ಮನ್ ಕಚೇರಿಗಳನ್ನು ಸ್ಥಾಪಿಸಿದೆ. ಸಾರ್ವಜನಿಕ ಆಡಳಿತ, ಕಾನೂನು, ಶಿಕ್ಷಣ, ಸಾಮಾಜಿಕ ಸೇವೆ ಅಥವಾ ನಿರ್ವಹಣೆಯಲ್ಲಿ ಕನಿಷ್ಠ 25 ವರ್ಷ ಅನುಭವ ಇರುವವರನ್ನು ಓಂಬುಡ್ಸ್ ಮನ್ ಗಳಾಗಿ ನೇಮಿಸಿಕೊಳ್ಳಲಾಗುತ್ತದೆ.


ಮಹಾತ್ಮ ಗಾಂಧಿ ನರೇಗಾ ಯೋಜನೆ ಅನುಷ್ಟಾನದಲ್ಲಿ ಅವ್ಯವಹಾರ ಆರೋಪಿಸಿ, ಈ ಕೆಳಗಿನ ಯಾವುದಾದರೂ ಒಂದು ಅಥವಾ ಹೆಚ್ಚಿನ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ಓಂಬುಡ್ಸ್ ಮನ್ ಅವರ ಬಳಿ ದಾಖಲಿಸಬಹುದು. ಗ್ರಾಮಸಭೆ (ಪ್ರಕ್ರಿಯಾತ್ಮಕ ಹಾಗೂ ಗಮನೀಯ ವಿಷಯಗಳು), ಕುಟುಂಬಗಳ ನೋಂದಣಿ ಮತ್ತು ಉದ್ಯೋಗ ಚೀಟಿಗಳ ವಿತರಣೆ, ಉದ್ಯೋಗ ಚೀಟಿಗಳ ಸುಪರ್ದಿ, ಕೆಲಸಕ್ಕೆ ಬೇಡಿಕೆ, ಕೆಲಸಕ್ಕೆ ಅರ್ಜಿ ಸಲ್ಲಿಕೆಯಾದಾಗ ನೀಡುವ ದಿನಾಂಕಯುಕ್ತ ಸ್ವೀಕೃತಿ ರಶೀದಿ, ವೇತನಗಳ ಪಾವತಿ, ನಿರುದ್ಯೋಗ ಭತ್ಯೆ ಪಾವತಿ, ಲಿಂಗ/ ಜಾತಿ/ ಧರ್ಮ ಆಧಾರದಲ್ಲಿ ತಾರತಮ್ಯ, ಕಾರ್ಯಸ್ಥಳದ ಸೌಲಭ್ಯಗಳು, ಕೆಲಸದ ಮಾಪನ, ಕೆಲಸದ ಗುಣಮಟ್ಟ, ಕಾರ್ಮಿಕರ ಬದಲು ಯಂತ್ರಗಳ ಬಳಕೆ, ಗುತ್ತಿಗೆದಾರರನ್ನು ಬಳಸಿಕೊಳ್ಳುವುದು, ಬ್ಯಾಂಕ್ ಗಳಲ್ಲಿ ಅಥವಾ ಅಂಚೆ ಕಚೇರಿಗಳಲ್ಲಿ ಖಾತೆಗಳ ವ್ಯವಹಾರ, ದೂರುಗಳ ನೋಂದಣಿ ಹಾಗೂ ವಿಲೇವಾರಿ, ಹಾಜರಿ ಪುಸ್ತಕದ ಪರಾಮರ್ಶನೆ, ದಾಖಲೆಗಳ ಪರಿಶೀಲನೆ, ಸಾಮಾಜಿಕ ಪರಿಶೋಧನೆ…. ಸೇರಿದಂತೆ ಯೋಜನೆಗೆ ಸಂಬಂಧಿಸಿದಂತೆ ಇನ್ನಿತರೆ ಅಂಶಗಳ ಕುರಿತು ದೂರು ದಾಖಲಿಸಬಹುದಾಗಿದೆ. ದೂರುಗಳ ಕುರಿತು ವಿಚಾರಣೆ ನಡೆಸಲು ಮತ್ತು ಮಾರ್ಗಸೂಚಿಯ ಪ್ರಕಾರ ಆದೇಶಗಳನ್ನು ನೀಡಲು ಓಂಬುಡ್ಸ್ ಮನ್ ಗಳಿಗೆ ಅಧಿಕಾರ ನೀಡಲಾಗಿದೆ.


ಮಂಡ್ಯ ಜಿಲ್ಲೆಯಲ್ಲಿಯೂ ಸಹ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಓಂಬುಡ್ಸ್ ಮನ್ ರನ್ನು ನೇಮಿಸಲಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯ ಒಂಬುಡ್ಸ್ ಮನ್ ಆಯ್ಕೆ ಸಮಿತಿಯು ದಿನಾಂಕ:23.02.2016ರಂದು ಜರುಗಿದ ಸಭೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಅಗತ್ಯತೆ ಮನಗಂಡು ಆಯಾಯ ವ್ಯಾಪ್ತಿಯ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ತಮ್ಮ ಇತರೆ ಶಾಸನಬದ್ಧ ಕರ್ತವ್ಯಗಳೊಂದಿಗೆ ಯೋಜನೆ ಅನುಷ್ಟಾನದ ಮೇಲ್ವಿಚಾರಣೆ, ಕುಂದುಕೊರತೆಗಳು ಮತ್ತು ದೂರುಗಳ ನಿವಾರಣಾ ಜವಾಬ್ದಾರಿಯನ್ನು ವಹಿಸಿರುತ್ತದೆ.


ವಿಳಾಸ:

ಓಂಬುಡ್ಸ್ ಮನ್

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

2ನೇ ಮಹಡಿ, ಜಿಲ್ಲಾ ಪಂಚಾಯತ್

ಮಂಡ್ಯ - 571401

ಕರ್ನಾಟಕ.

08232 – 239748

ombud.mdy[at]gmail[dot]com

ಒಂಬುಡ್ಸ್ ಮನ್ ಮೇಲ್ಮನವಿ ಪ್ರಾಧಿಕಾರ:

ಕರ್ನಾಟಕ ಓಂಬುಡ್ಸ್ ಮನ್ ಮೇಲ್ಮನವಿ ಪ್ರಾಧಿಕಾರ

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ

2ನೇ ಮಹಡಿ, 3ನೇ ಹಂತ, ಬಹುಮಹಡಿಗಳ ಕಟ್ಟಡ

ಬೆಂಗಳೂರು – 5600001

ಕರ್ನಾಟಕ.

080-223421638

karnregs[at]gmail[dot]com

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಓಂಬುಡ್ಸ್ ಮನ್ ಕಾರ್ಯಾಲಯ, ಮಂಡ್ಯದಲ್ಲಿ ದಾಖಲಾದ ದೂರು/ ಪ್ರಕರಣಗಳ ಕುರಿತು ಆರ್ಥಿಕ ವರ್ಷವಾರು ಮಾಹಿತಿ:


2013-14          2014-15          2015-16          2016-17          2017-18          2018-19          2019-20 (ನವೆಂಬರ್ -2019ರ ಅಂತ್ಯಕ್ಕೆ)         

ಆದೇಶಗಳು:

ಕ್ರ.ಸಂ. ವಿಷಯ ಆದೇಶ / ದಿನಾಂಕ
1 ಕೆ.ಆರ್.ಪೇಟೆ ತಾಲ್ಲೂಕು ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಟಾನಗೊಳಿಸುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬುವುದಾಗಿ ದೂರು ಜಿಪಂಮ/ಒಂ/ಉಖಾಯೋ/ದೂರು-31/2016-17; ದಿನಾಂಕ:21-08-2018