ಮಾಹಿತಿ ಹಕ್ಕು ಅಧಿನಿಯಮ

"ಮಾಹಿತಿ ಹಕ್ಕು ಅಧಿನಿಯಮ - 2005ರ ಕೇಂದ್ರ ಕಾಯ್ದೆ ಸಂಖ್ಯೆ: 22ರಡಿಯಲ್ಲಿ ಜಿಲ್ಲಾ ಪಂಚಾಯತ್, ಮಂಡ್ಯ ಕಚೇರಿಯನ್ನು ಸಾರ್ವಜನಿಕ ಪ್ರಾಧಿಕಾರವೆಂದು ಪರಿಗಣಿಸಿ ಸದರಿ ಅಧಿನಿಯಮದ ಕಲಂ 5(1) ಹಾಗೂ 5(2)ರಡಿಯಲ್ಲಿ ಕ್ರಮವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ನೇಮಕ ಮಾಡಿ ದಿನಾಂಕ:17-09-2005ರಂದು ಹೊರಡಿಸಿದ ಪ್ರಕಟಣೆಯನ್ನು ಕಾಲೋಚಿತಗೊಳಿಸಿ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಮಾಹಿತಿ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. "


ಮಂಡ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಕ್ಷಮ ಪ್ರಾಧಿಕಾರ / ಸಾರ್ವಜನಿಕ ಮಾಹಿತಿ ಅಧಿಕಾರಿ , ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಗಳಿಗೆ ಸಂಬಂಧಿಸಿದ ಮಾಹಿತಿ new

ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಮಂಡ್ಯ

ಕ್ರ.ಸಂ. ಶಾಖೆ ಹೆಸರು ಸಾರ್ವಜನಿಕ ಮಾಹಿತಿ ಅಧಿಕಾರಿ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಕಲಂ 19(1)ರಂತೆ ಮೊದಲನೇ ಮೇಲ್ಮನವಿ ಪ್ರಾಧಿಕಾರ ಕಲಂ 19(1)ರಂತೆ ಎರಡನೇ ಮೇಲ್ಮನವಿ ಪ್ರಾಧಿಕಾರ
1 ಆಡಳತ ಶಾಖೆ ಉಪ ಕಾರ್ಯದರ್ಶಿ (ಆಡಳಿತ),
ಜಿ.ಪಂ. ಮಂಡ್ಯ
ಸಹಾಯಕ ಕಾರ್ಯದರ್ಶಿ (ಆಡಳಿತ),
ಜಿ.ಪಂ. ಮಂಡ್ಯ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,ಜಿ.ಪಂ. ಮಂಡ್ಯ ಆಯುಕ್ತರು ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು
2 ಅಭಿವೃದ್ಧಿ ಶಾಖೆ ಮತ್ತು ಪರಿಷತ್ ಶಾಖೆ ಉಪ ಕಾರ್ಯದರ್ಶಿ (ಅಭಿವೃದ್ಧಿ),
ಜಿ.ಪಂ. ಮಂಡ್ಯ
ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ),
ಜಿ.ಪಂ. ಮಂಡ್ಯ
3 ಡಿ.ಆರ್.ಡಿ.ಎ. ಕೋಶ ಯೋಜನಾ ನಿರ್ದೇಶಕರು,
ಡಿ.ಆರ್.ಡಿ.ಎ. ಕೋಶ ಜಿ.ಪಂ. ಮಂಡ್ಯ
ಸಹಾಯಕ ಯೋಜನಾಧಿಕಾರಿ (ಎಸ್.ಜಿ.ಎಸ್.ವೈ) ಜಿ.ಪಂ. ಮಂಡ್ಯ
4 ಯೋಜನಾ ಶಾಖೆ ಮುಖ್ಯ ಯೋಜನಾಧಿಕಾರಿ, ಜಿ.ಪಂ. ಮಂಡ್ಯ ಯೋಜನಾ, ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಜಿ.ಪಂ. ಮಂಡ್ಯ
5 ಲೆಕ್ಕ ಶಾಖೆ ಮುಖ್ಯ ಲೆಕ್ಕಾಧಿಕಾರಿ, ಜಿ.ಪಂ. ಮಂಡ್ಯ ಲೆಕ್ಕಾಧಿಕಾರಿ, ಜಿ.ಪಂ. ಮಂಡ್ಯ
6 ಅಕ್ಷರ ದಾಸೋಹ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ), ಜಿ.ಪಂ. ಮಂಡ್ಯ
7 ಓಂಬುಡ್ಸ್ ಮನ್ ಓಂಬುಡ್ಸ್ ಮನ್, ಜಿ.ಪಂ. ಮಂಡ್ಯ

ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರ - ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ

ಕ್ರ.ಸಂ. ಶಾಖೆ ಹೆಸರು ಸಾರ್ವಜನಿಕ ಮಾಹಿತಿ ಅಧಿಕಾರಿ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಕಲಂ 19(1)ರಂತೆ ಮೊದಲನೇ ಮೇಲ್ಮನವಿ ಪ್ರಾಧಿಕಾರ ಕಲಂ 19(1)ರಂತೆ ಎರಡನೇ ಮೇಲ್ಮನವಿ ಪ್ರಾಧಿಕಾರ
1 ತಾಲ್ಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕರು ಸಹಾಯಕ ಲೆಕ್ಕಾಧಿಕಾರಿ ಕಾರ್ಯನಿರ್ವಾಹಕ ಅಧಿಕಾರಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು
2 ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಮಾಹಿತಿ ಕೋರುವ ಸಾರ್ವಜನಿಕರಿಗೆ ಸೂಚನೆಗಳು

 1. 1. ಮಾಹಿತಿ ಪಡೆಯಲಿಚ್ಛಿಸುವವರು ಕಲಂ(6)ರಂತೆ ಲಿಖಿತ ಕೋರಿಕೆಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸುವುದು
 2. 2. ಅರ್ಜಿದಾರರು ರೂ. 10/- ಅನ್ನು ಪ್ರಾರಂಭಿಕ ಶುಲ್ಕವಾಗಿ ನಗದು ರೂಪದಲ್ಲಿ/ ಬೇಡಿಕೆ ಹುಂಡಿ/ ಧನಾದೇಶ/ ಪೋಸ್ಟಲ್ ಆರ್ಡರ್ ಮೂಲಕ ಪಾವತಿಸುವುದು
 3. 3. ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ದಿನಾಂಕದಿಂದ 30 ದಿನಗಳೊಳಗೆ ಮಾಹಿತಿ ದೊರೆಯದಿದ್ದಲ್ಲಿ/ ಮಾಹಿತಿ ನಿರಾಕರಿಸಿದ್ದಲ್ಲಿ ಕಲಂ (7)ರ ಅಡಿಯಲ್ಲಿ 30 ದಿನಗಳೊಳಗಾಗಿ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು
 4. 4. ಪ್ರತಿ ಮಾಹಿತಿಗೆ ಈ ಕೆಳಕಂಡ ದರದಲ್ಲಿ ಶುಲ್ಕ ಪಾವತಿಸುವುದು

 5. * ಎ-4 ಅಳತೆಯ ಕಾಗದದಲ್ಲಿ ಮಾಹಿತಿ ಪ್ರತಿ ಪುಟಕ್ಕೆ ರೂ. 2/-
  * ವಿದ್ಯುನ್ಮಾನ ಡಿಸ್ಕ್, ಪ್ಲಾಪಿ, ಸಿಡಿಯಲ್ಲಿ ಸಂಗ್ರಹಿಸಲ್ಪಟ್ಟ ಮಾಹಿತಿ ಒಂದಕ್ಕೆ ರೂ. 50/-
  * ಬಡತನ ರೇಖೆಗಿಂತ ಕೆಳಗಿನ ಅರ್ಜಿದಾರರು ಷರತ್ತಿಗೊಳಪಟ್ಟು ಶುಲ್ಕದಲ್ಲಿ ವಿನಾಯಿತಿ

ಆರ್.ಟಿ.ಐ: ನಮೂನೆಗಳು

 1. 1. ಮಾಹಿತಿ ಕೋರಿ ಸಲ್ಲಿಸಬೇಕಾದ ನಮೂನೆ – ಎ 6(1)
 2. 2. ಪ್ರಥಮ ಮೇಲ್ಮನವಿಯ ನಮೂನೆ_19(1) - ಕನ್ನಡ/ಇಂಗ್ಲೀಷ್
 3. 3. ದ್ವಿತೀಯ ಮೇಲ್ಮನವಿಯ ನಮೂನೆ_19(3)_ ಕನ್ನಡ
 4. 4. ದ್ವಿತೀಯ ಮೇಲ್ಮನವಿಯ ನಮೂನೆ_19(3)_ ಇಂಗ್ಲೀಷ್
 5. 5. ಫೀರ್ಯಾದು ಸಲ್ಲಿಸಲು ಒದಗಿಸಬೇಕಾದ ದಾಖಲೆಗಳ ನಮೂನೆ_18(1)_ಕನ್ನಡ
 6. 6. ಫೀರ್ಯಾದು ಸಲ್ಲಿಸಲು ಒದಗಿಸಬೇಕಾದ ದಾಖಲೆಗಳ ನಮೂನೆ_18(1)_ಇಂಗ್ಲೀಷ್
ಕ್ರ.ಸಂ. ವರ್ಷ ವಿವರ ಪಟ್ಟಿ
1 2022 ಜಿಲ್ಲಾ ಪಂಚಾಯತ್, ಮಂಡ್ಯ 4(1)ಬಿ
2 2021 ಜಿಲ್ಲಾ ಪಂಚಾಯತ್, ಮಂಡ್ಯ 4(1)ಬಿ
3 2020 ಜಿಲ್ಲಾ ಪಂಚಾಯತ್, ಮಂಡ್ಯ 4(1)ಬಿ
4 2019 ಜಿಲ್ಲಾ ಪಂಚಾಯತ್, ಮಂಡ್ಯ 4(1)ಬಿ
5 2018 ಜಿಲ್ಲಾ ಪಂಚಾಯತ್, ಮಂಡ್ಯ 4(1)ಎ 4(1)ಬಿ
6 2021-22 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ,ಮಂಡ್ಯ ಜಿಲ್ಲೆ, ಮಂಡ್ಯ 4(1)ಎ 4(1)ಬಿ