ಆಡಳಿತ ಶಾಖೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅಧ್ಯಾಯ 12ರಲ್ಲಿ ಜಿಲ್ಲಾ ಪಂಚಾಯತ್ ಸಿಬ್ಬಂದಿ ಬಗ್ಗೆ ವಿವರಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿ ಕಾರ್ಯನಿರ್ವಹಿಸಲು ಸರ್ಕಾರವು ಅವಶ್ಯಕವೆಂದು ಪರಿಗಣಿಸಬಹುದಾದಷ್ಟು ಸಂಖ್ಯೆಯ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಹಾಗೂ ಅಖಿಲ ಭಾರತ ಸೇವಾ ಅಧಿಕಾರಿಗಳನ್ನು ನಿಯುಕ್ತಿ ಮಾಡಲಾಗುತ್ತದೆ.


ಉಪ ಕಾರ್ಯದರ್ಶಿ (ಆಡಳಿತ), ಉಪ ಕಾರ್ಯದರ್ಶಿ (ಅಭಿವೃದ್ಧಿ), ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಮತ್ತು ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ) ಅವರನ್ನು ಸರ್ಕಾರದಿಂದ ನೇಮಕ ಮಾಡಲಾಗುತ್ತದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು/ಯೋಜನೆಗಳನ್ನು ಅನುಷ್ಟಾನಗೊಳಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಈ ಅಧಿಕಾರಿಗಳು ನೆರವಾಗುತ್ತಾರೆ.


ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 196(2)ರಲ್ಲಿ ಉಪ ಕಾರ್ಯದರ್ಶಿ (ಆಡಳಿತ ಮತ್ತು ಅಭಿವೃದ್ಧಿ), ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಮತ್ತು ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ) ಅವರನ್ನು ನೇಮಕ ಮಾಡಿದ್ದು, ಈ ಅಧಿನಿಯಮದ ಪ್ರಕರಣ 197ರಡಿ ಸೂಚಿಸಲಾದ ಕರ್ತವ್ಯಗಳ ನಿರ್ವಹಣೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಹಾಯ ಮಾಡುತ್ತಾರೆ. ಪ್ರಕರಣ 186ರಡಿ ರಚಿಸಲಾಗಿರುವ ಸ್ಥಾಯಿ ಸಮಿತಿಗಳ ಪದನಿಮಿತ್ತ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

ಶಾಖೆ ನಿರ್ವಹಣೆ ಮಾಡುತ್ತಿರುವ ಯೋಜನೆಗಳು/ ವಿಷಯ ಸಂಕಲನಗಳು

  • ಉಪ ಕಾರ್ಯದರ್ಶಿ (ಆಡಳಿತ ಶಾಖೆ )
  • ಉಪ ಕಾರ್ಯದರ್ಶಿ (ಅಭಿವೃದ್ಧಿ)
  • ಮುಖ್ಯ ಯೋಜನಾಧಿಕಾರಿ (ಯೋಜನಾ ಶಾಖೆ)
  • ಮುಖ್ಯ ಲೆಕ್ಕಾಧಿಕಾರಿ (ಲೆಕ್ಕ ಶಾಖೆ)
  • ಯೋಜನಾ ನಿರ್ದೇಶಕರು

ಉಪ ಕಾರ್ಯದರ್ಶಿ (ಆಡಳಿತ ಶಾಖೆ )

ಉಪ ಕಾರ್ಯದರ್ಶಿ (ಆಡಳಿತ ಶಾಖೆ )

ಕ್ರ.ಸಂ. ನಿರ್ವಹಣೆ ಮಾಡುತ್ತಿರುವ ಯೋಜನೆಗಳು/ ವಿಷಯ ಸಂಕಲನಗಳುು
1 ತಾಲ್ಲೂಕು ಪಂಚಾಯತ್ ಮತ್ತು ಸಿಬ್ಬಂದಿ ವಿಷಯಗಳು
2 ಗ್ರಾಮ ಪಂಚಾಯತ್ ಪಿ.ಡಿ.ಓ ಮತ್ತು ಸಿಬ್ಬಂದಿ ವಿಷಯಗಳು
3 ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಷಯಗಳು
4 ಗ್ರಾಮ ಪಂಚಾಯತ್ ನೌಕರರು (ಬಿಲ್‍ಕಲೆಕ್ಟರರ್, ವಾಟರ್‍ಮೆನ್, ಕಂಪ್ಯೂಟರ್ ಆಪರೇಟರ್ ಮತ್ತು ಸ್ವಚ್ಚತಾಗಾರರು) ಸಿಬ್ಬಂದಿ ವಿಷಯಗಳು
5 ರಜೆ ಮಂಜೂರಾತಿ ಮತ್ತು ಮುಂಗಡಗಳು
6 ಅಧೀನ ಕಚೇರಿಗಳ ತಪಾಸಣೆಗಳು
7 ಅಧೀನ ಕಚೇರಿಗಳ ಅಧಿಕಾರಿಗಳ ದಿನಚರಿಗಳ ಪರಿಶೀಲನೆ/ಅನುಮೋದನೆ
8 ಅಧೀನ ಕಚೇರಿಗಳ ಪ್ರಸ್ತಾವನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವುದು
9 ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆ
10 ಅಭಿಲೇಖಾಲಯ ನಿರ್ವಹಣೆ
11 ಲೇಖನ ಸಾಮಾಗ್ರಿ ಮತ್ತು ಪೀಠೋಪಕರಣ ಇತರೆ ಸಾಮಾಗ್ರಿಗಳ ಖರೀದಿ ಮತ್ತು ನಿರ್ವಹಣೆ
12 ವಾಹನಗಳ ಖರೀದಿ ಮತ್ತು ನಿರ್ವಹಣೆ
13 ಸ್ವೀಕೃತಿ ಮತ್ತು ರವಾನೆ ಶಾಖೆ
14 ಅಕ್ಷರ ದಾಸೋಹ
15 ಜಿ.ಪಂ.ವ್ಯಾಪ್ತಿಯ ಎಲ್ಲಾ ಇಲಾಖೆಗಳ (ತಾಲ್ಲೂಕು ಪಂಚಾಯತ್ ಒಳಗೊಂಡಂತೆ) ಆಡಳಿತಾತ್ಮಕ ನಿಯಂತ್ರಣ
16 ಆಡಳಿತ ಶಾಖೆಗೆ ಸಂಬಂಧಿಸಿದ ಆರ್.ಟಿ.ಐ/ ಹೆಚ್.ಆರ್.ಸಿ/ ಲೋಕಾಯುಕ್ತ/ ಎಸಿಬಿ/ ವಿವಿಧ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು
17 ನಬಾರ್ಡ್- ಆರ್.ಐ.ಡಿ.ಎಫ್ ಯೋಜನೆ
18 ಆರ್.ಐ.ಡಿ.ಎಫ್ ರಸ್ತೆ, ಸೇತುವೆ ಮತ್ತು ಕಟ್ಟಡಗಳು
19 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಸೂಚಿಸುವ ಇತರೆ ಕೆಲಸಗಳು

ಉಪ ಕಾರ್ಯದರ್ಶಿ (ಅಭಿವೃದ್ಧಿ)

ಉಪ ಕಾರ್ಯದರ್ಶಿ (ಅಭಿವೃದ್ಧಿ)

ಕ್ರ.ಸಂ. ನಿರ್ವಹಣೆ ಮಾಡುತ್ತಿರುವ ಯೋಜನೆಗಳು/ ವಿಷಯ ಸಂಕಲನಗಳುು
1 ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
2 ಸಾಮಾಜಿಕ ಲೆಕ್ಕ ಪರಿಶೋಧನೆ
3 ಗ್ರಾಮೀಣ ವಸತಿ/ನಿವೇಶನ ಯೋಜನೆಗಳು
4 ಗ್ರಾಮ ಪಂಚಾಯತ್‍ಗಳ ಡಿ.ಸಿ.ಬಿ ಹಾಗೂ ಸಂಬಂಧಿಸಿದ ಮಾಹಿತಿ
5 ತಾಲ್ಲೂಕು ಪಂಚಾಯತ್ ಅನಿರ್ಭಂಧಿತ ಅನುದಾನ
6 ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಯೋಜನೆ
7 ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣ ನಿರ್ವಹಣೆ
8 ಗಾಂಧಿ ಗ್ರಾಮ ಪುರಸ್ಕಾರ
9 ರಾಷ್ಟ್ರೀಯ ಜೈವಾನಿಲ ಮತ್ತು ಮ್ಯಾನ್ಯೂರ್ ಮ್ಯಾನೆಜ್ ಮೆಂಟ್ ಕಾರ್ಯಕ್ರಮ
10 ಸೌರಬೆಳಕು ಯೋಜನೆ
11 ಜೈವಿಕ ಇಂಧನ ಯೋಜನೆ
12 ಇ-ಸ್ವತ್ತು, ಜಮಾಬಂಧಿ, ಗ್ರಾಮ ಸಭೆ ಆರ್.ಎಫ್.ಡಿ.
13 ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ
14 ಜೀತವಿಮುಕ್ತ ಯೋಜನೆ
15 ಗ್ರಾಮ ಪಂಚಾಯತ್ ಸಿಬ್ಬಂದಿ - ಗ್ರೇಡ್-1 ಮತ್ತು ಗ್ರೇಡ್ -2 ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಸಿಬ್ಬಂದಿ ನೇಮಕಾತಿ/ಶಿಸ್ತು ಪ್ರಾಧಿಕಾರಿ
16 ಸಂಸದ್ ಆದರ್ಶ ಗ್ರಾಮ
17 ಅಭಿವೃದ್ಧಿ ಶಾಖೆಗೆ ಸಂಬಂಧಿಸಿದ ಆರ್.ಟಿ.ಐ/ ಹೆಚ್.ಆರ್.ಸಿ/ಲೋಕಾಯುಕ್ತ/ಎಸಿಬಿ/ ವಿವಿಧ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು
18 Election SVEEP Activities (ಚುನಾವಣಾ SVEEP ಚಟುವಟಿಕೆಗಳು)
19 ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನ
20 ಬೆಳೆ ಸಮೀಕ್ಷೆ/ಬೆಳೆ ವಿಮೆ
21 ಕೆರೆ ಸಂಜೀವಿನಿ
22 ಅಂಗನವಾಡಿ ಕಟ್ಟಡಗಳು
23 ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳ ಅಭಿವೃದ್ಧಿಗೆ ಸಂಬಂಧಿಸಿದ ದೂರುಗಳು
24 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಸೂಚಿಸುವ ಇತರೆ ಕೆಲಸಗಳು

ಮುಖ್ಯ ಯೋಜನಾಧಿಕಾರಿ (ಯೋಜನಾ, ಅಂದಾಜು ಮತ್ತು ಮೌ್ಲ್ಯಮಾಪನ ಶಾಖೆ)

ಮುಖ್ಯ ಯೋಜನಾಧಿಕಾರಿ (ಯೋಜನಾ, ಅಂದಾಜು ಮತ್ತು ಮೌ್ಲ್ಯಮಾಪನ ಶಾಖೆ)

ಕ್ರ.ಸಂ. ನಿರ್ವಹಣೆ ಮಾಡುತ್ತಿರುವ ಯೋಜನೆಗಳು/ ವಿಷಯ ಸಂಕಲನಗಳುು
1 ಕರಡು ವಾರ್ಷಿಕ ಯೋಜನೆ ಸಿದ್ಧಪಡಿಸುವುದು
2 ಲಿಂಕ್ ಡಾಕ್ಯೂಮೆಂಟ್ – ಜಿ.ಪಂ. ಮತ್ತು ತಾ.ಪಂ. ವಾರ್ಷಿಕ ಕ್ರಿಯಾಯೋಜನೆ, 2702 ಸಣ್ಣಕೆರೆ ಮತ್ತು ಸಿ.ಎಂ.ಜಿ.ಎಸ್.ವೈ.
3 ಟಾಸ್ಕ್ ಫೋರ್ಸ್ ರಸ್ತೆ
4 ಜಿಲ್ಲಾ ಯೋಜನಾ ಸಮಿತಿ (ಡಿ.ಪಿ.ಸಿ)
5 ಸಾಮಾನ್ಯ ಸ್ಥಾಯಿ ಸಮಿತಿ ಸಭೆ
6 ಸಾಮಾನ್ಯ ಸಭೆ
7 ಕೆ.ಡಿ.ಪಿ ಮತ್ತು ಎಂ.ಪಿಕ್
8 ಜಿ.ಪಿ.ಡಿ.ಪಿ.
9 ತಾಲ್ಲೂಕು ಪಂಚಾಯತ್ ನಿಧಿ-3
10 ವಿಶೇಷ ಅಭಿವೃದ್ಧಿ ಯೋಜನೆ (ನಂಜುಂಡಪ್ಪ ವರದಿ)
11 ವಾರ್ಷಿಕ ಆಡಳಿತ ವರದಿ
12 ಸಿ.ಎಂ.ರಿಪೋರ್ಟ್ ಎಸ್‍ಸಿಪಿ ಮತ್ತು ಟಿಎಸ್‍ಪಿ ಮಹಿಳಾ ಅಭಿವೃದ್ಧಿ ಅಂಗವಿಕಲರ ಕಲ್ಯಾಣ ಯೋಜನೆ ಪ್ರಗತಿ ವರದಿ
13 14ನೇ ಹಣಕಾಸು
14 ಅಧಿಬಾರ ಶುಲ್ಕ
15 ಆರ್.ಡಿ.ಪಿ.ಆರ್ ಪ್ರಗತಿ ವರದಿಗಳು
16 ಸಫಾಯಿ ಕರ್ಮಚಾರಿ
17 ಯೋಜನಾ ಶಾಖೆಗೆ ಸಂಬಂಧಿಸಿದ ಆರ್.ಟಿ.ಐ/ ಹೆಚ್.ಆರ್.ಸಿ/ಲೋಕಾಯುಕ್ತ/ಎಸಿಬಿ/ ವಿವಿಧ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು
18 ಮುಖ್ಯ ಕಾರ್ನಿರ್ವಾಹಕ ಅಧಿಕಾರಿ ಅವರು ಸೂಚಿಸುವ ಇತರೆ ಕೆಲಸಗಳು.

ಮುಖ್ಯ ಲೆಕ್ಕಾಧಿಕಾರಿ (ಲೆಕ್ಕ ಶಾಖೆ)

ಮುಖ್ಯ ಲೆಕ್ಕಾಧಿಕಾರಿ (ಲೆಕ್ಕ ಶಾಖೆ)

ಕ್ರ.ಸಂ. ನಿರ್ವಹಣೆ ಮಾಡುತ್ತಿರುವ ಯೋಜನೆಗಳು/ ವಿಷಯ ಸಂಕಲನಗಳುು
1 ಜಿಲ್ಲಾ ಪಂಚಾಯತ್‍ನ ಹಣಕಾಸು ವಿಷಯ ನಿರ್ವಹಣೆ
2 ಮುಖ್ಯ ಲೆಕ್ಕಾಧಿಕಾರಿ ಅವರ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೆ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ನೀಡುವುದು
3 ಹಣಕಾಸು ವಿಷಯಗಳ ನಿರ್ವಹಣೆ ಬಗ್ಗೆ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ನೀಡುವುದು
4 ಮುಖ್ಯ ಲೆಕ್ಕಾಧಿಕಾರಿಗಳ ಶಾಖೆಗೆ ಸಂಬಂಧಿಸಿದ ಆರ್.ಟಿ.ಐ/ಹೆಚ್.ಆರ್.ಸಿ/ಲೋಕಾಯುಕ್ತ/ಎಸಿಬಿ/ ವಿವಿಧ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು
5 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಸೂಚಿಸುವ ಇತರೆ ಕೆಲಸಗಳು

ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ. ಶಾಖೆ)

ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ. ಶಾಖೆ)

ಕ್ರ.ಸಂ. ನಿರ್ವಹಣೆ ಮಾಡುತ್ತಿರುವ ಯೋಜನೆಗಳು/ ವಿಷಯ ಸಂಕಲನಗಳುು
1 ಗ್ರಾಮವಿಕಾಸ ಯೋಜನೆ
2 ಸುವರ್ಣಗ್ರಾಮೋದಯ ಯೋಜನೆ
3 ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)
4 ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ)
5 ಜಿಲ್ಲಾ ಜಾಗೃತಿ ಸಮಿತಿ
6 ಆರ್.ಜಿ.ಸಿ.ವೈ
7 ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ
8 ಡಿ.ಆರ್.ಡಿ.ಎ ಶಾಖೆಗೆ ಸಂಬಂಧಿಸಿದ ಆರ್.ಟಿ.ಐ/ಹೆಚ್.ಆರ್.ಸಿ/ಲೋಕಾಯುಕ್ತ/ಎಸಿಬಿ/ ವಿವಿಧ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು
9 ಗ್ರಾಮೀಣ ಕುಡಿಯುವ ನೀರಿನ ಯೋಜನೆ
10 3054 ವಿಶೇಷ ಅಭಿವೃದ್ಧಿ ಅನುದಾನ-ರಸ್ತೆ ಮತ್ತು ಸೇತುವೆ
11 ಇ- ಆಡಳಿತ (e-governance)
12 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಸೂಚಿಸುವ ಇತರೆ ಕೆಲಸಗಳು